Saturday, October 1, 2016

ಸಂಯಮಂ ಯಕ್ಷಗಾನ ತಾಳಮದ್ದಳೆ ಬೆಂಗಳೂರಿನಲ್ಲಿ ೧೭-೧೦-೨೦೧೬ ರಿಂದ ೨೬-೧೦-೨೦೧೬

ಯಕ್ಷಗಾನ


Friday, July 29, 2016

August 21 2016 Bengaluruಕಾಳಿ೦ಗ ಮದ೯ನ, ಸುದಶ೯ನ ವಿಜಯ ಜುಲ್ಯೆ 3131ಕ್ಕೆ ಎರಡು ಯಕ್ಷಗಾನ ಪ್ರಸ೦ಗ

ಕಾಳಿ೦ಗ ಮದ೯ನ, ಸುದಶ೯ನ ವಿಜಯ ಯಕ್ಷಗಾನ ಪ್ರದಶ೯ನ ಯಕ್ಷಕಲಾ ಸಾಗರ ಸ೦ಸ್ಥೆ ಆಯೋಜನೆ

ವಿಜಯವಾಣಿ ಸುದ್ದಿಜಾಲ ಬೆ೦ಗಳೂರು

ಯಕ್ಷಕಲಾ ಸಾಗರ ಸ೦ಸ್ಥೆಯಿ೦ದ ಇದೇ ಮೊದಲ ಬಾರಿಗೆ ಬೆ೦ಗಳೂರಿನಲ್ಲಿ "ಕಾಳಿ೦ಗ ಮದ೯ನ' ಮತ್ತು "ಸುದಶ೯ನ ವಿಜಯ' ಯಕ್ಷಗಾನ ಪ್ರಸ೦ಗ ಪ್ರದಶ೯ನಗೊಳ್ಳಲಿದೆ.
ಭಾನುವಾರ (ಜುಲ್ಯೆ 31) ಕೆ೦ಪೇಗೌಡನಗರದ ಉದಯಭಾನು ಕಲಾಸ೦ಘದಲ್ಲಿ

ಸ೦ಜೆ 4ರಿ೦ದ ನಡೆಯುವ ಯಕ್ಷಗಾನ ಪ್ರದಶ೯ನಕ್ಕೆ ಉಚಿತ ಪ್ರವೇಶವಿರಲಿದೆ.

ಗುರು ಶ್ರೀ ರಕ್ಷಿತ್ ಫಡೆ್ರ ನಿದೇ೯ಶನದ ಈ ಪ್ರಸ೦ಗವನ್ನು ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾಕೇ೦ದ್ರದ ವಿದ್ಯಾಥಿ೯ಗಳು ಪ್ರಸ್ತುತಪಡಿಸುವರು.

ಪ್ರಫâಲ್ಲ ಚ೦ದ್ರ ನೆಲ್ಯಾಡಿ ಅವರ ಭಾಗವತಿಕೆ ಇರಲಿದ್ದು,
ಮೃದ೦ಗದಲ್ಲಿ ಗುರುಪ್ರಸಾದ ಬೊಳಿ೦ಜಡ್ಕ,
ಚ೦ಡೆಯಲ್ಲಿ ಅಡೂರು ಹರೀಶ್‍ರಾವ್,
ಚಕ್ರತಾಳದಲ್ಲಿ ರಜನೀಶ್ ಭಟ್ ಸಾಥ ನೀಡುವರು.

ಕಾಳಿ೦ಗ ಮತ್ತು ದೇವೇ೦ದ್ರನಾಗಿ ಮ್ಯೆತ್ರಿ ಭಟ್, ಶ್ರೀಕೃಷ್ಣ ಮತ್ತು ಅಗ್ನಿಯಾಗಿ ಅದ್ವಿಕಾ ಶೆಟ್ಟಿ, ಬಲರಾಮ- ವಾಯುವಾಗಿ ಸನ್ನಿ˜ ಶೆಟ್ಟಿ, ಗರುಡನಾಗಿ ರಕ್ಷಿತ್ ದೇವಾಡಿಗ, ವಿಷ್ಣುವಾಗಿ ಶುಭದಾ ಶೆಟ್ಟಿ, ಲಕ್ಷ್ಮೀಯಾಗಿ ಡಾ. ವಷಾ೯ ಶೆಟ್ಟಿ ಮತ್ತಿತರರು ವೇದಿಕೆ ಏರಲಿದ್ದಾರೆ.

July 30 2016 UdupiEdaneeru Sri chaturmasya August 1 2016 - August 15 2016Thursday, June 9, 2016

02 July 2016 - ಮೈಮೆದ ಕಲ್ಕುಡ ಕಲ್ಲುರ್ಟಿ - ಸಿರಿಬೂಡುದ ಧರ್ಮದೈವ

ಯಕ್ಷಗಾನ

16 July 2016 Shreedevi Leelamruta Mangaluru

ಯಕ್ಷಗಾನ

July 17 2016 Shreedevi Shakambari Yugapurusha Kinnigoli

ಯಕ್ಷಗಾನ

19 June 2016 Samrat Marutta - Garuda Garvabhanga - Neerchalu

ಯಕ್ಷಗಾನ

02 July 2016 Mangalore Jagajatti Bacha

ಯಕ್ಷಗಾನ

18 June 2016 Udupi

ಯಕ್ಷಗಾನ

20-06-2016 - 26-06-2016 Pavanje Yakshagana Talamaddale Saptaha

ಯಕ್ಷಗಾನ ತಾಳಮದ್ದಳೆ ಸಪ್ತಾಹ ಪಾವಂಜೆ

Kateelu talamaddale saptaha

ಯಕ್ಷಗಾನTuesday, June 7, 2016

ಕಟೀಲು ತಾಳಮದ್ದಳೆ ಸಪ್ತಾಹ 2016. [12 ನೇ ವರುಷ] ಯಜ್ಞಾರ್ಥ ಸಂಪ್ರಾಪ್ತಿ" ದಿನಾಂಕ- ಜೂನ್ 13 ರಿಂದ 19ರ ತನಕ

ಕಟೀಲು ತಾಳಮದ್ದಳೆ ಸಪ್ತಾಹ 2016.  [12 ನೇ ವರುಷ]
_______________________
ಶೀರ್ಷಿಕೆ-

"ಯಜ್ಞಾರ್ಥ ಸಂಪ್ರಾಪ್ತಿ"
     ~~~~~~~~~

ದಿನಾಂಕ- ಜೂನ್ 13  ರಿಂದ 19ರ ತನಕ

ಸ್ಥಳ- ಸರಸ್ವತೀ ಸದನ ,ಕಟೀಲು

***----------***---------***
ದಿನಾಂಕ 13/6/2016 ಸೋಮವಾರ
ಸಂಜೆ 4 ರಿಂದ 8 ತನಕ

ಪ್ರಸಂಗ- ದಕ್ಷ ಯಜ್ಞ
ಕವಿ-ದೇವಿದಾಸ

ಭಾಗವತರು-
ಕುಬಣೂರು ಶ್ರೀಧರ ರಾವ್
ಪದ್ಯಾಣ ಗೋವಿಂದ ಭಟ್ಟ
ಸತೀಶ ಶೆಟ್ಟಿ ಬೋಂದೆಲ್.

ಹಿಮ್ಮೇಳ-
ಲಕ್ಷ್ಮೀಶ ಅಮ್ಮಣ್ಣಾಯ
ದೇವಾನಂದ ಭಟ್ಟ ಬೆಳುವಾಯಿ

ಅರ್ಥಧಾರಿಗಳು-
ಡಾ|ಕೋಳ್ಯೂರು ರಾಮಚಂದ್ರ ರಾವ್
ವಿಟ್ಲ ಶಂಭು ಶರ್ಮ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ದಿನೇಶ ಶೆಟ್ಟಿ ಕಾವಳಕಟ್ಟೆ
ರವಿಶಂಕರ ವಳಕ್ಕುಂಜ
ಪಕಳಕುಂಜ ಶ್ಯಾಮ ಭಟ್ಟ
ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ
ಈಶ್ವರಪ್ರಸಾದ ಧರ್ಮಸ್ಥಳ
P.ವಿಜಯಾನಂದ ರಾವ್
•••••••••••••••••••••••••••••••
ದಿನಾಂಕ 14/6/2016 ಮಂಗಳವಾರ
ಸಂಜೆ 4 ರಿಂದ 8ರ ತನಕ

ಪ್ರಸಂಗ - ಚ್ಯವನ ಯಜ್ಞ
ಕವಿ- ಅಮೃತ ಸೋಮೇಶ್ವರ

ಭಾಗವತರು-
ರಾಮಕೃಷ್ಣ ಮಯ್ಯ ಸಿರಿಬಾಗಿಲು
ಪ್ರಫುಲ್ಲಚಂದ್ರ ನೆಲ್ಯಾಡಿ

ಹಿಮ್ಮೇಳ-
ಅಡೂರು ಗಣೇಶ ರಾವ್
ಗುರುಪ್ರಸಾದ ಬೊಳಿಂಜಡ್ಕ

ಅರ್ಥಧಾರಿಗಳು-
K.ಗೋವಿಂದ ಭಟ್ಟ
M.R.ವಾಸುದೇವ ಸಾಮಗ
ಭಾಸ್ಕರ ರೈ ಕುಕ್ಕುವಳ್ಳಿ
ವಿದ್ವಾನ್ ಕೃಷ್ಣ ಕುಮಾರ ಮೈಸೂರು
ಪೆರ್ಮುದೆ ಜಯಪ್ರಕಾಶ ಶೆಟ್ಟಿ
ಶಶಿಕಾಂತ ಶೆಟ್ಟಿ ಕಾರ್ಕಳ
ಸದಾಶಿವ ಆಳ್ವ ತಲಪಾಡಿ
ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟ
••••••••••••••••••••••••••••••••
ದಿನಾಂಕ 15/6/2016 ಬುಧವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ಪೃಥು ಯಜ್ಞ
ಕವಿ- ಶ್ರೀಧರ D.S

ಭಾಗವತರು-
ದಿನೇಶ ಅಮ್ಮಣ್ಣಾಯ
ಶ್ರೀನಿವಾಸ ಬಳ್ಳಮಂಜ

ಹಿಮ್ಮೇಳ-
ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ
ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ

ಅರ್ಥಧಾರಿಗಳು-
M.L.ಸಾಮಗ
ಸರ್ಪಂಗಳ ಈಶ್ವರ ಭಟ್ಟ
ನಿಟ್ಟೂರು ಶಾಂತಾರಾಮ ಪ್ರಭು
ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ
ವಾಟೆಪಡ್ಪು ವಿಷ್ಣು ಶರ್ಮ
ಮಾಧವ ಬಂಗೇರ ಕೊಳ್ತಮಜಲು
ಬಾಲಕೃಷ್ಣ ಭಟ್ಟ ಪುತ್ತಿಗೆ
•••••••••••••••••••••••••••••••
ದಿನಾಂಕ16/6/2016 ಗುರುವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ಗಯ ಯಜ್ಞ
ಕವಿ- M.A.ಹೆಗಡೆ ಸಿದ್ಧಾಪುರ

ಭಾಗವತರು-
ಪದ್ಯಾಣ ಗಣಪತಿ ಭಟ್ಟ
ಗಿರೀಶ ರೈ ಕಕ್ಕೆಪದವು

ಹಿಮ್ಮೇಳ-
ಜನಾರ್ದನ ತೋಳ್ಪಾಡಿತ್ತಾಯ
ಕಡಬ ವಿನಯ ಆಚಾರ್ಯ
ರಾಮಪ್ರಸಾದ ವದ್ವ
ಯೋಗೀಶ ಆಚಾರ್ಯ ಉಳೆಪಾಡಿ

ಅರ್ಥಧಾರಿಗಳು-
M.A.ಹೆಗಡೆ ಸಿದ್ಧಾಪುರ
ವಿದ್ವಾನ್ ಕೆರೇಕೈ ಉಮಾಕಾಂತ ಭಟ್ಟ
ಸೇರಾಜೆ ಸೀತಾರಾಮ ಭಟ್ಟ
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ
ರವಿರಾಜ ಪನೆಯಾಲ
ಹರೀಶ ಬಳಂತಿಮೊಗರು
ತಾರಾನಾಥ ಬಲ್ಯಾಯ ವರ್ಕಾಡಿ
ಸೀತಾರಾಂ ಕುಮಾರ ಕಟೀಲು
ಕುಮಾರಿ ಸಾವಿತ್ರೀ ಶಾಸ್ತ್ರಿ
••••••••••••••••••••••••••••••
ದಿನಾಂಕ17/6/2016 ಶುಕ್ರವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ನಿಮಿ ಯಜ್ಞ
ಕವಿ- ರಾಧಾಕೃಷ್ಣ ಕಲ್ಚಾರ್

ಭಾಗವತರು -
ರವಿಚಂದ್ರ ಕನ್ನಡಿಕಟ್ಟೆ
ದೇವೀಪ್ರಸಾದ ಆಳ್ವ ತಲಪಾಡಿ

ಹಿಮ್ಮೇಳ-
ಪದ್ಯಾಣ ಶಂಕರನಾರಾಯಣ ಭಟ್ಟ
ಚೈತನ್ಯಕೃಷ್ಣ ಪದ್ಯಾಣ

ಅರ್ಥಧಾರಿಗಳು-
ಹಿರಣ್ಯ ವೇಂಕಟೇಶ ಭಟ್ಟ
ರಾಧಾಕೃಷ್ಣ ಕಲ್ಚಾರ್
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ
ಶ್ರೀರಮಣ ಆಚಾರ್ಯ ಕಾರ್ಕಳ
••••••••••••••••••••••••••••••••
ದಿನಾಂಕ 18/6/2016 ಶನಿವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ತ್ರಿಶಂಕು ಯಜ್ಞ
ಕವಿ- ಬವಲಾಡಿ ಹಿರಣ್ಣಯ್ಯ ಹೆಬ್ಬಾರ

ಭಾಗವತರು-
ಬಲಿಪ ನಾರಾಯಣ ಭಾಗವತ
ರಮಾನಂದ ರಾವ್ ಕಟೀಲು

ಹಿಮ್ಮೇಳ-
ಕಟೀಲು ಮುರಳೀಧರ ಭಟ್ಟ
ಲೋಕೇಶ ಕಟೀಲು
ಪದ್ಮನಾಭ ಶೆಟ್ಟಿಗಾರ ಪಕ್ಷಿಕೆರೆ

ಅರ್ಥಧಾರಿಗಳು-
ಡಾ|ರಮಾನಂದ ಬನಾರಿ
ಪಂಜ ಭಾಸ್ಕರ ಭಟ್ಟ
ಗಣರಾಜ ಕುಂಬ್ಳೆ
ವಾಸುದೇವ ರಂಗಾಭಟ್ಟ ಮಧೂರು
ವಿನಯ ಆಚಾರ್ಯ ಹೊಸಬೆಟ್ಟು
•••••••••••••••••••••••••••••••
ದಿನಾಂಕ - 19/6/2016 ಆದಿತ್ಯವಾರ
ಬೇಳಗ್ಗೆ 9.30 ರಿಂದ ರಾತ್ರಿ 8 ರ ತನಕ

ಪ್ರಸಂಗ - ಅಶ್ವಮೇಧ ಯಜ್ಞ

ಬೆಳಗ್ಗೆ 9.30 ರಿಂದ ಅಪರಾಹ್ನ 1.30 ರ ತನಕ

ಆಖ್ಯಾನ - ತಾಮ್ರಧ್ವಜ ಕಾಳಗ
ಕವಿ- ರಾಮ

ಭಾಗವತರು-
ಪುತ್ತಿಗೆ ರಘುರಾಮ ಹೊಳ್ಳ
ಪ್ರಸಾದ ಬಲಿಪ

ಹಿಮ್ಮೇಳ-
ಪದ್ಮನಾಭ ಉಪಾಧ್ಯಾಯ
ಮುರಾರಿ ಕಡಂಬಳಿತ್ತಾಯ

ಅರ್ಥಧಾರಿಗಳು-
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ
K. ಗೋವಿಂದ ಭಟ್ಟ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ನಾ‌.ಕಾರಂತ ಪೆರಾಜೆ
ಪಶುಪತಿ ಶಾಸ್ತ್ರಿ
ವಾದಿರಾಜ ಕಲ್ಲೂರಾಯ
ಗಣೇಶ ಶೆಟ್ಟಿ ಕನ್ನಡಿಕಟ್ಟೆ
‌‌‌         ~~~~~••••~~~~~~

ಅಪರಾಹ್ನ 2 ರಿಂದ ರಾತ್ರಿ 8 ರ ತನಕ

ಆಖ್ಯಾನ- ಸುಧನ್ವ ಕಾಳಗ
ಕವಿ - ಮೂಲಿಕೆ ರಾಮಕೃಷ್ಣಯ್ಯ

ಭಾಗವತರು -
ವಿದ್ವಾನ್ ಗಣಪತಿ ಭಟ್ಟ(ಬಡಗು)
ಪಟ್ಲ ಸತೀಶ ಶೆಟ್ಟಿ (ತೆಂಕು)

ಹಿಮ್ಮೇಳ-
ರಾಘವೇಂದ್ರ ಹೆಗಡೆ ಯಲ್ಲಾಪುರ(ಬಡಗು)

ಕೃಷ್ಣಪ್ರಕಾಶ ಉಳಿತ್ತಾಯ}
ದೇವೀಪ್ರಸಾದ ಕಟೀಲು }ತೆಂಕು
ರಾಜೇಶ ಕಟೀಲು           }

ಅರ್ಥಧಾರಿಗಳು-

ಉಡುವೆಕೋಡಿ ಸುಬ್ಬಪ್ಪಯ್ಯ
ಬರೆ ಕೇಶವ ಭಟ್ಟ
ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ
ವಾಸುದೇವ ರಂಗಾಭಟ್ಟ ಮಧೂರು
ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟ
ರಾಮ ಜೋಯಿಸ ಬೆಳ್ಳಾರೆ
ಸುಧಾಕರ ಜೈನ್ ಬೆಂಗಳೂರು
ರವಿ ಅಲೆವೂರಾಯ
                 ~~~~~•••~~~~~
ಸಪ್ತಾಹದ ಆಶಯಕ್ಕನುಗುಣವಾಗಿ ರಚಿತವಾದ 3 ನೂತನ ಪ್ರಸಂಗಗಳ (ಪೃಥು ಯಜ್ಞ,ಗಯ ಯಜ್ಞ,ನಿಮಿ ಯಜ್ಞ)ಕಥಾ ಸಂಯೋಜನೆ -
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ

ಸಪ್ತಾಹ ಸಂಯೋಜನೆ - ವಾಸುದೇವ ರಂಗಾಭಟ್ಟ ಮಧೂರು.
              ~~~~•••~~~~
               
     ***ಸರ್ವರಿಗೂ ಸ್ವಾಗತ***

Thursday, January 7, 2016

"ಪುರುಷಾಮೃಗ ಪ್ರಸಂಗ"

"ಪುರುಷಾಮೃಗ ಪ್ರಸಂಗ"
--------------------------
ಮೊನ್ನೆ ಬೆಂಗಳೂರಿನಿಂದ ಊರಿಗೆ ಹೋದವ ಹೇಗಾದ್ರೂ ಮಾಡಿ ಆಟಕ್ಕೆ ಹೋಗ್ಬೇಕು ಅಂತ ನಿರ್ಧಾರ ಮಾಡಿ ಕಟೀಲು ಮೇಳದ ಆಟ ಎಲ್ಲಿದೆ ಹುಡುಕಿ ಉಪ್ಪಿನಂಗಡಿಯ ಮೂಲೆಯೊಂದರಿಂದ ಸಂಜೆ ಐದಕ್ಕೆ ಹೊರಟು, ರಾತ್ರಿ ಒಂಭತ್ತು ಒಂಭತ್ತೂವರೆಯ ಹೊತ್ತಿಗೆ ಕಟೀಲಿಗೆ ತಲುಪಿದೆ ಆದಿವಸ ಶುಕ್ರವಾರ ಜನವರಿ ಒಂದನೇ ತಾರೀಕು ಎರಡೆರಡು ಮೇಳಗಳ ಆಟ ಒಂದೇ ಕಡೆ. ಇವತ್ತು ಅಲ್ಲಿಗೆ ಒಮ್ಮೆ ಹೋಗುವುದು ಇಲ್ಲಿಗೆ ಒಮ್ಮೆ ಹಾಗೇ ಆಟ ನೋಡ್ಬೇಕಷ್ಟೆ ಅಂದುಕೊಂಡೆ. ಆದರೆ ಅಂಡಾಲರು ಕುಳಿತಿರುವವರೆಗೆ ಇಲ್ಲಿಯೇ ಕುಳಿತಿರಬೇಕು ಎನ್ನುವ ಶಪಥ ಹಾಕಿ ಬಂದಿದ್ದೆ, ನಮ್ಮ ಅಂಡಾಲರು ಹೇಗೆ ಆಟ ಆಡಿಸ್ತಾರೆ ನೋಡ್ಲೇಬೇಕು ಅಂದುಕೊಂಡಿದ್ದೆ.

Photo: Sudhakar Jain

ಆವತ್ತಿನ ಪ್ರಸಂಗ ಗಜೇಂದ್ರ ಮೋಕ್ಷ, ಪುರುಷಾಮೃಗ ಮತ್ತು ರತಿಕಲ್ಯಾಣ. ಪೂರ್ತಿ ರಾತ್ರೆಗೆ ಆದ ಕಾರಣ ಮೂರು ಪ್ರಸಂಗಗಳನ್ನು ಆಡಿಸಿದ್ದು ಎಲ್ಲಿಯೂ ಗಡಿಬಿಡಿ ಮಾಡದೇ ಪ್ರತೀ ಪ್ರಸಂಗವೂ ಚಂದವಾಯ್ತು.
ಸರಿ ಸುಮಾರು ಹನ್ನೆರಡೂ ವರೆಗೆ ತಿಳಿನೀಲಿಯ ಜುಬ್ಬಾ ತೊಟ್ಟಿದ್ದ ಹಣೆಗೆ ಗೌರವದ ತಿಲಕ ಇಟ್ಟಿದ್ದ ಕೆಂಪು ಮುಂಡಾಸು ತೊಟ್ಟಿದ್ದ ಅಂಡಾಲ ದೇವಿಪ್ರಸಾದ "ಭಾಗವತರ" ಪ್ರವೇಶವಾಯ್ತು, ಅವರು ಬಂದು ಕುಳಿತ ಠೀವಿಯೇ ಚಂದ ಅಲ್ಲಿಂದ ಮುಂದೆ ಮೂರೂ ಕಾಲರ ವರೆಗೆ, ಪುರುಷಾಮೃಗ ಪ್ರಸಂಗದ ಕೊನೆಯಾಗುವಲ್ಲಿಯವರೆಗೆ ಎಲ್ಲಿಯೂ ಪ್ರಸಂಗ ಸಿಕ್ಕಿ ಹಾಕಿಕೊಳ್ಳದಂತೆ, ಸಭಿಕರ ಚಿತ್ತ ಅತ್ತಿತ್ತ ಚಲಿಸದಂತೆ ಚೆನ್ನಾಗಿ ಆಟ ಆಡಿಸಿದ್ರು. ಪರಂಪರೆಯ ಕ್ರಮದಲ್ಲೇ ಭೀಮ ಪುರುಷಾಮೃಗವನ್ನು ತರುವ ಸನ್ನಿವೇಶ ಎರಡು ಮೂರು ಬಾರಿ ಹನೂಮಂತನ ರೋಮವನ್ನುದುರಿಸಿ ಅಲ್ಲಿ ಶಿವಲಿಂಗ ಪ್ರತ್ಯಕ್ಷವಾಗುವಾಗ ಪೂಜೆ ಮಾಡುವ ಸನ್ನಿವೇಷಗಳು ಅಲ್ಲಿನ ಪದ್ಯಗಳು ಇವೆಲ್ಲಾ ನಾಜೂಕಾಗಿ ಬಯಲಾಟದ ರಂಗತಂತ್ರಗಳನ್ನು ಬಿಡದೇ ಮಾಡಿಸಿದ್ದು ಆ ಪ್ರಸಂಗ "ಪಾಸ್" ಕೊನೆಗೆ ರಾಜಸೂಯದ ಯಾಗಶಾಲೆಯನ್ನು ಭೀಮ ಹೊಗುವಾಗ ಹೊಸ್ತಿಲಿಂದಾಚೆಗೆ ಎಳೆಯುವ ಪುರುಷಾಮೃಗದ ದೃಶ್ಯ ಶ್ರೀಕೃಷ್ಣ, ಧರ್ಮರಾಯ, ಅರ್ಜುನ ಇವರೆಲ್ಲಾ ಪುರುಷಾಮೃಗದಿಂದ ಭೀಮನನ್ನು ಕಾಪಾಡುವ ದೃಶ್ಯವೂ ಅಚ್ಚಳಿಯದಂತೆ ಮೂಡಿತು. ನಾನು ಅಂಡಾಲರನ್ನು ಮೆಚ್ಚಿದ್ದು ಅವರು ಪ್ರಸಂಗವನ್ನು ಮುನ್ನಡೆಸುವ ರೀತಿಗೆ, ಎಲ್ಲಿಯೂ ತನ್ನ ಭಾಗವತಿಕೆಯೇ ವಿಜ್ರಂಭಿಸಬೇಕೆಂದು ಎಳೆದಾಡದೆ ಕ್ರಮಪ್ರಕಾರವಾಗಿ ಹಾಡಿದ್ರು. ಏರುಪದ್ಯ ಸೌಮ್ಯಪದ್ಯ ಎನ್ನುವ ಭೇದ ಮಾಡದೆ ಎಲ್ಲದಕ್ಕೂ ಸಮಾನ ಪ್ರಾಶಸ್ತ್ಯ ಕೊಟ್ಟು, ವೇಷಧಾರಿಗಳನ್ನೂ ನಿರ್ದೇಶಿಸಿ ಪ್ರಸಂಗ ಯಶಸ್ವಿಯಾಗುವಂತೆ ಮಾಡಿದ್ರು. ಬೇಕಾದ ಪದ್ಯ ಕ್ರಮ ಎಲ್ಲವನ್ನೂ ಬಿಡದೆ, ಉದಾಸೀನ ಮಾಡದೆ ಪ್ರಸಂಗವನ್ನು ಮುನ್ನಡೆಸುವ ಜಾಣ್ಮೆ ಅಂಡಾಲರದ್ದು.

ಕಟೀಲಿಗೆ ಹೋಗಿ ಎರಡು ಮೇಳಗಳ ಆಟವಿದ್ದರೂ ನಾನು ನೋಡಿದ್ದು ಒಂದು ಕಡೆಯ ಆಟ ಮಾತ್ರ ಆದರೆ ಆ ಬಗ್ಗೆ ಯಾವುದೇ ಬೇಸರವಿಲ್ಲ, ಪೂಂಜರ ಪದದ ಲಾಲಿತ್ಯ, ಮುರಳಿಯವರ ಚೆಂಡೆಯ ಝೇಂಕಾರ, ಅಂಡಾಲರ ಪ್ರಸಂಗ ನಡೆ, ಆಳ್ವರ ಸಂಗೀತಲಹರಿ, ಗಣೇಶ್ ಬೆಳ್ಳಾರೆ, ಕಾರಂತರು, ಆಚಾರ್ಯರು ಹೀಗೆ ಹಿಮ್ಮೇಳದ ಎಲ್ಲಾ ಕಲಾವಿದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಏನೂ ಬೇಸರವಿಲ್ಲದೇ ಕೆಲಸ ಮಾಡಿದ್ದಾರೆ. ಮುಮ್ಮೇಳದ ಕಲಾವಿದರ ಕಾಣಿಕೆಯೂ ಸಮಪಾಲಿದೆ, ಎಲ್ಲರ ದುಡಿಮೆಯಿಂದಾಗಿ ನನ್ನಂತಹ ಸಾಮಾನ್ಯಪ್ರೇಕ್ಷಕನಿಗೆ ಉತ್ತಮ ಬಯಲಾಟವೊಂದನ್ನು ಸವಿಯುವ ಯೋಗ ದೊರಕಿತು.

ಯಕ್ಷಗಾನಂ ಗೆಲ್ಗೆ...

#yakshagana #kateelumela #andala