Tuesday, September 20, 2011

Sampaje Yakshotsava 2011


Tuesday, August 9, 2011

ಯಕ್ಷಗಾನದ ನಾದಶಿಲ್ಪಿ - ಮುಂಡಪ್ಪಣ್ಣ

ಯಕ್ಷಗಾನವನ್ನು ಪ್ರೀತಿಯಿಂದ ಅಸ್ವಾದಿಸುವ ನಾವು, ಯಾವತ್ತಾದರೂ ಆ ಸುಮಧುರ ನಾದವನ್ನು ಹೊರಡಿಸುವ ಚೆಂಡೆ-ಮದ್ದಳೆಗಳನ್ನು ಆಸಕ್ತಿಯಿಂದ ತಯಾರಿಸಿದವರು ಯಾರು ಎಂಬ ಬಗ್ಗೆ ಯೋಚಿಸುತ್ತೇವೆಯೋ...

ಹಾಗಿದ್ದಲ್ಲಿ ಅಂತಹ ನಾದಶಿಲ್ಪಿಯೊರ್ವರು ಇಲ್ಲಿದ್ದಾರೆ. ಮಂಗಳೂರಿನ ಹೊರವಲಯದ ವಾಮಂಜೂರಿನ ತಮ್ಮ ಮನೆಯಲ್ಲೇ ಚೆಂಡೆ-ಮದ್ದಳೆಗಳ ಮಧ್ಯೆ ಕುಳಿತು ತಾವು ಮುಚ್ಚಿಗೆ ಮಾಡಿದ ಚೆಂಡೆಯನ್ನು ಪ್ರೀತಿಯಿಂದ ನುಡಿಸುತ್ತಿರುವ ಮುಂಡಪ್ಪಣ್ಣ ನ ವೀಡಿಯೋದ ಸಂಕಲೆ ಯಕ್ಷಗಾನಾಸಕ್ತರಿಗೆ ....

ಸರಳ ಸಜ್ಜನ ಮುಂಡಪ್ಪಣ್ಣ ಎಲೆಮರೆಯ ಕಾಯಿಯಂತೆ ಕಲಾಸೇವೆಯಲ್ಲಿ ನಿರತರಾಗಿದ್ದಾರೆ. ಸದಾ ಕಾರ್ಯಪ್ರವೃತ್ತರಾಗಿರುವ ಇವರ ಬಳಿಯಲ್ಲೆ ಕೆಲವಾದರೂ ಚೆಂಡೆ-ಮದ್ದಳೆಗಳು ಪ್ರತೀ ನಿತ್ಯ ಕಾಯಕಲ್ಪಕ್ಕೊಳಗಾಗುತ್ತವೆ..
ಇವರ ಶ್ರಮವನ್ನು ಶ್ಲಾಘಿಸುವ ಸಣ್ಣ ಯತ್ನ...
Yakshagana should be recognised as the Karnataka art form: Moily

Friday, July 8, 2011

ಯಕ್ಷಲೋಕ ದರ್ಶನ

Source: email by Raj Kumar(yakshachintana.blogspot.com)


ಶ್ರೀಯುತ ದೇವಾನ೦ದ ಭಟ್, ಶೋಭಾ ಡಿಜಿಟಲ್ studio   ಮತ್ತು ಅವರ ಮಿತ್ರ ಬಳಗದವರು ಸಾದರ ಪಡಿಸುವ  "ಯಕ್ಷಲೋಕ ದರ್ಶನ "ವೆಂಬ ಯಕ್ಷಗಾನದ ವೈವಿಧ್ಯಮಯ ಪ್ರದರ್ಶನ  ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇದೆ ಬರುವ ಜುಲೈ 18 ರಿಂದ 24 ರ ವರೆಗೆ ಪ್ರತಿ ದಿನ ಸಂಜೆ 5 ರಿಂದ 8 ಗಂಟೆಯವರೆಗೆ    ನಡೆಯಲಿದೆ .
18-7-2011 - ಮಹಿಳಾ ಯಕ್ಷಗಾನ ಭಾಗವತಿಕೆ ವೈವಿಧ್ಯ  ಶ್ರೀಮತಿ ಲೀಲಾವತಿ ಬೈಪಡಿತ್ತಾಯರ ಹಿರಿತನದಲ್ಲಿ
19-7-2011- ದೀವಟಿಕೆ ಆಟ "ರುದ್ರ ಭೀಮ -ರಕ್ತ ರಾತ್ರಿ " ಶ್ರೀ ಬಲಿಪ ನಾರಾಯಣ ಭಾಗವತರ ನಿರ್ಧೆಶನದಲ್ಲಿ  
20-7-2011- ಹಾಸ್ಯ ಕಲಾವಿದರ ಚಾವಡಿ ಕೂಟ
21-7-2011- ಯಕ್ಷಗಾನ  ನಾಟ್ಯ ವೈಭವ  ತೆಂಕುX ಬಡಗು
22-7-2011- ಯಕ್ಷಗಾನ ವಿಲಾಸ- ವೈಖರಿ - ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ನಿರ್ಧೆಶನದಲ್ಲಿ  ಹಿರಿಯ ಕಲಾವಿದರ ಸಮಾಗಮದಲ್ಲಿ
23-7-2011- ತಾಳಮದ್ದಲೆ  ಶ್ರೀರಾಮ ದರ್ಶನ - ಶ್ರೀ ಕುಬಣೂರು ಶ್ರೀಧರ ರಾವ್  ಹಿರಿತನದಲ್ಲಿ ಹಿರಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ
24-7-2011- ಸಮಾರೋಪ ಸಮಾರ೦ಭ - ಮಕ್ಕಳ ಯಕ್ಷಗಾನ "ಮೋಹಿನಿ ಏಕಾದಶಿ " ಮತ್ತು ಪಾರ್ಥ ಸಮರ್ಥ "

ಕಲಾಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಆತ್ಮೀಯ ಆಮಂತ್ರಣಪೂರ್ವಕ ಸಂಘಟಕರ ಪರವಾಗಿ ವಿನಂತಿ.

Tuesday, June 28, 2011

ತಲೆಂಗಳ ಗೋಪಾಲಕೃಷ್ಣ ಭಟ್ ನಿಧನ

ತಲೆಂಗಳ ಗೋಪಾಲಕೃಷ್ಣ ಭಟ್  ನಿಧನ


ಅಪ್ರತಿಮ ಚೆಂಡೆ ವಾದಕ ತಲೆಂಗಳ ಗೋಪಾಲಕೃಷ್ಣ ಭಟ್ ಇವರು ಕಳೆದ ೨೪ರಂದು ನಿಧನರಾದರು..
ಶ್ರೀಯುತರ ನಿಧನದಿಂದ ತೆಂಕುತಿಟ್ಟು, ಮತ್ತೋರ್ವ ಪರಂಪರೆಯ ಚೆಂಡೆವಾದಕರನ್ನು ಕಳಕೊಂಡಂತಾಗಿದೆ.
ಶ್ರೀಯುತರ ಆತ್ಮಕ್ಕೆ ದೇವರು ಶಾಂತಿಯನ್ನು ಕರುಣಿಸಲಿ...

http://www.youtube.com/watch?v=obDvL5jrVdY

Yakshagana Stalwart, Lawyer, Dr Shankar Sheni, No More