Tuesday, June 30, 2015

Yakshayana 1-7-2015 moodabidre

Yakshayana p1 1-7-2015 moodabidre

Friday, June 26, 2015

ಯಕ್ಷಗಾನ ಆಡಿಯೋ ದಾಖಲೀಕರಣ

➖➖➖➖➖➖➖➖➖
          ದಾಖಲೀಕರಣ  ಶೇಖರೀಕರಣ
ನಮ್ಮ ಕಾಲದಲ್ಲಿ ಎಲ್ಲಾ ಹೀಗಿರಲಿಲ್ಲ. ಅದು ಹಾಗಿತ್ತು ಹೀಗಿತ್ತು ಎಂದು ಹಿರಿಯರು ವರ್ಣಿಸುವ ರೀತಿಯೇ ಅದು ಹಾಗೆಯೇ ಅನ್ನುವುದನ್ನು ಕಟ್ಟಿಕೊಡುತ್ತದೆ.
ಜನಪದ ಕಲೆಯಾಗಿದ್ದ ಯಕ್ಷಗಾನ ಇಂದು ಶಾಸ್ತ್ರೀಯ ಕಲೆಯಾಗಿದೆ. ಇದು ಅಂದು ಹೇಗಿತ್ತು ಇಂದು ಹೀಗೆದೆ ಎಂದೂ, ಅಂದಿನ ಕಾಲದ ಆ ಹಿರಿಯ ಕಲಾವಿದರು ಹೀಗೆಲ್ಲಾ ತನ್ನ ಕಲೆಯನ್ನು ಪ್ರದರ್ಶಿಸಿ ಮೆರೆದರು ಎಂದು ಒಂದಷ್ಟು ವ್ಯಾತ್ಯಾಸಗಳನ್ನು ನಮ್ಮ ಹಿರಿಯರು ಮಾತಾಡುತ್ತಲೇ ಬರುತ್ತಿದ್ದಾರೆ. ಇದು ನಿರಂತವಾಗಿಯೂ ಇರುತ್ತದೆ ಕೂಡ.
ಅಂದು ಹೇಗಿತ್ತು ಅನ್ನುವುದನ್ನು ಕೆಲವೊಂದು ಘಟನೆಗಳನ್ನು ನಾವು ಕೇವಲ ಕಥೆಯಾಗಿ ಕೇಳಬಲ್ಲೆವೇ ಹೊರತು ಹೌದು ಎಂದು ಒಪ್ಪಿಕೊಳ್ಳಬಲ್ಲ ದಾಖಲೆ ನಮ್ಮಲ್ಲಿ ಇಲ್ಲ.
ಆದರೆ ಇಂದು ಹಾಗಲ್ಲ ಮನಸ್ಸು ಮಾಡಿದರೆ ಪ್ರತಿ ಕ್ಷಣವನ್ನೂ ದಾಖಲಿಸಿಕೊಂಡು ಶೇಖರಣೆಮಾಡಿಡ ಬಹುದಾದ ತಂತ್ರಜ್ಞಾನ ನಮ್ಮಲ್ಲಿದೆ.
ಅದರೂ ನಾವು ಅದನ್ನು ಬಳಕೆ ಮಾಡುತ್ತಿಲ್ಲ.
ಮುಖ್ಯವಾಗಿ ತಾಳಮದ್ದಳೆಯಲ್ಲಿ ಈ ಕೊರತೆ ಕಾಣುತ್ತಿದೆ. ಸುದ್ದಿ ಕೇಳುತ್ತೇವೆ ಮೊನ್ನೆ ನಡೆದ ತಾಳಮದ್ದಳೆಯಲ್ಲಿ ಅವರ ಅರ್ಥ ಭಾರಿ ಒಳ್ಳೆಯದಾಗಿತ್ತು. ಹೋ ಹೌದಾ ಛೇ..... ಎಂದು ಕಾಡುತ್ತದೆ. ಛೇ ಎಂದು ಕಾಡುವುದು ಅದನ್ನು ಕೇಳುವ ಭಾಗ್ಯ ನನಗೆ ಇಲ್ಲದಾಗಿ ಹೋಯ್ತಲ್ಲಾ. ಅಷ್ಟು ಮಾತ್ರವಲ್ಲದೆ ಒಂದು ಹಂತಕ್ಕೆ ಆ ಭಾಗ್ಯ ಮುಂದೆ ಸಿಗದೋ ಇಲ್ಲ ಎಂಬ ಕೊರಗು ಹುಟ್ಟುತ್ತದೆ. ಯಾಕೆಂದರೆ ಆ ತಾಳಮದ್ದಳೆಯು ದಾಖಲಾಗಿರುವುದಿಲ್ಲ ಅಂದರೆ ಆಡಿಯೋ ಆಗಲಿ ವೀಡಿಯೋ ಯಾವುದೇ ರೀತಿಯಲ್ಲಿ ರೆಕಾರ್ಡ್ ಆಗಿರುವುದಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ತಾಳಮದ್ದಳೆ ಸಪ್ತಾಹ ಮಾಡುತ್ತಾರೆ. ಸಾವಿರ ಖರ್ಚುಮಾಡಿ ರೆಕಾರ್ಡ್ ಮಾಡುವುದರ ಬಗ್ಗೆ ಆಸಕ್ತಿ ಇಲ್ಲದಾಗುತ್ತದೋ ಅಥವಾ ಏನು ತಾಂತ್ರಿಕ ಸಮಸ್ಯೆ ಆಗಿರುತ್ತದೋ ಗೊತ್ತಿಲ್ಲ. ತಾಳಮದ್ದಳೆಯನ್ನು ಪ್ರೀತಿಸುವ ನನ್ನಂತಹ ದೂರದೂರಿನಲ್ಲಿರುವ ಜೀವಗಳಿಗೆ ಅನ್ಯಾಯ ಆಗುತ್ತಿದೆ.
ನಿನ್ನೆ ಕಟೀಲಿನ ಆಸ್ರಣ್ಣರಾದ ಹರಿನಾರಯಣ ರವರಲ್ಲಿ ಇಪ್ಪತ್ತೆರಡು ನಿಮಿಷ ಫೋನಲ್ಲಿ ಮಾತಾಡುವ ಭಾಗ್ಯ ಸಿಕ್ಕಿತ್ತು. ನಿಜಕ್ಕೂ ನನ್ನ ಪಾಲಿಗೆ ಇದು ಭಾಗ್ಯವೇ. ಆ ಇಪ್ಪತ್ತೆರಡು ನಿಮಿಷ ಮಾತಾಡುವಾಗ ನನಗೆ ಒಂದು ತರಗತಿಯಲ್ಲಿ ಇದ್ದಹಾಗೆ ಅನುಭವ ಆಗಿತ್ತು.
ಮಾತಿನ ಬಗ್ಗೆ ಗುರುಗಳು ತಾಳಮದ್ದಳೆಯ ಬಗ್ಗೆ ಇರಿಸಿಕೊಂಡಿರುವ ಪಾವಿತ್ರ್ಯತೆಯ ಭಾವದ ಬಗ್ಗೆ ಒಂದು ಮಾತು ಬಂತು.
ನಿಮಗೆಲ್ಲಾ ಗೊತ್ತಿರಬಹುದು ಹರಿ ಆಸ್ರಣ್ಣರು ದೇವಸ್ತಾದಲ್ಲಿ ನಡೆಯುವ ತಾಳಮದ್ದಳೆಯಲ್ಲಿ ಮಾತ್ರ ಅರ್ಥ ಹೇಳುವುದಂತೆ ಮತ್ತೆ ಯಾವುದೇ ಕಾರಣಕ್ಕೂ ತಾನು ಹೇಳುವ ಅರ್ಥಕ್ಕೆ ಪ್ರತಿಯಾಗಿ "ಅರ್ಥವನ್ನು" ತಗೊಳುವುದಿಲ್ಲ. ಆಗ ನನಗೊಂದು ಉಪಾಯ ಬಂತು ನಾನೊಂದು ಎಂದಾದರೂ ನನ್ನ ಊರಿನಲ್ಲಿ ತಾಳಮದ್ದಳೆ ಮಾಡಿಸುವುದಿದ್ದರೆ ದೇವಸ್ಥಾನದಲ್ಲೇ ಆಯೋಜನೆ ಮಾಡಿದರಾಯ್ತು. ಯಾಕೆಂದರೆ ಹರಿ ಆಸ್ರಣ್ಣರ ಅರ್ಥದಲ್ಲಿ ಭೋದನೆ ಇದೆ ಬದುಕಿಗೆ ಬೇಕಾದ ಧರ್ಮ ಇದೆ.
ಎಂಟುವರ್ಷ ಗುರುಕುಲದಲ್ಲಿ ಸಂಸ್ಕೃತ ಓದಿದವರು. ಧರ್ಮವನ್ನು ಅಧ್ಯಾಯನ ಮಾಡಿದವರು.
ಯಾಕೆ ಇವರ ವಿಷಯ ಹೇಳ್ತಾ ಇದ್ದೇನೆ ಎಂದರೆ ಕಟೀಲಿನಲ್ಲಿ ಮಾಡುವ ತಾಳಮದ್ದಳೆ ಸಪ್ತಾಹದ ವೀಡಿಯೋ ಸಹಿತ ದಾಖಲೀಕರಣ ಆಗುತ್ತಿದೆ. ಇದು ನಮಗೆ ಮುಂದೊಂದು ದಿನ ದೊಡ್ಡ ಸಂಪತ್ತೇ ಆಗಿರುತ್ತದೆ.
ಆದರೂ ಗುರುಗಳು ಮಾತಾಡುತ್ತಾ ಮಾತಾಡುತ್ತಾ ತಾನು ಮಾಡಿದ ಒಂದು ಪಾತ್ರದ ಬಗ್ಗೆ ಹೇಳುತ್ತಾ ಆ ಪಾತ್ರದ ಅರ್ಥ ಸ್ವತಃ ತನಗೆ ಒಂದು ಹಂತದ ಸಮದಾನ ಆಗಿದೆ ಎಂದರು. ತಕ್ಷಣ ನಾನು ಗುರುಗಳೇ ಅದರ ರೆಕಾರ್ಡ್ ಇದೆಯಾ ಎಂದು ಕೇಳಿದರೆ....! ಇಲ್ಲ ಅದು ಹೊರಗಡೆ ಬೇರೆ ದೇವಸ್ಥಾನದಲ್ಲಿ ಆಗಿದ್ದು ಅಂದರು.
ಮನಸ್ಸು ಮಾಡಿದರೆ ಅದೇ ಪ್ರಸಂಗವನ್ನು ಇವರೇ ಇನ್ನೊಂದು ಸಲ ಮಾಡಿಸಿಯಾರು. ಆದರೆ ಇನ್ನೊಂದು ಸಲ ಮಾಡಿದಾಗ ಅದೇ ಪಾತ್ರ ಮತ್ತೆ ಅಷ್ಟು ಚೆನ್ನಾಗಿ ಬರಬಹುದಾ......? ಅಥವಾ ಅದಕ್ಕಿಂತ ಚೆನ್ನಾಗಿಯೇ ಬರಬಹುದು ಆದರೆ ಅಂದು ಬಂದ ಅರ್ಥ ವಿಷಯಗಳು ಬರದೇ ಇರಬಹುದು. ಅಂದು ಅದು ಆ ವಾತಾವರಣ ಪ್ರೇರಣೆ ಕೊಟ್ಟ ಅರ್ಥ ಆಗಿರುತ್ತದೆ.
ಕೋರಿಕೊಂಡೆನು ಗುರುಗಳೇ ದಯಮಾಡಿ ಇನ್ನು ಮುಂದೆ ನೀವು ನಿಮ್ಮ ಅರ್ಥಗಳನ್ನು ಎಲ್ಲಿಯೇ ಆದರೂ ಅದು ದಾಖಲೀಕರಣ ಆಗುವಂತೆ ಮತ್ತು ಶೇಖರಿಕರಣ ಆಗುವಂತೆ ನೋಡಿಕೊಳ್ಳಬೇಕು ಎಂದು. ತಕ್ಷಣ ಅದಕ್ಕೆ ಒಪ್ಪಿಕೊಂಡವರೇ ಒಂದು ಒಳ್ಳೆಯ ಗುಣಮಟ್ಟದ ರೆಕಾರ್ಡರ್ ತಗೊಳ್ಳುವ ನಿರ್ಧಾರ ಮಾಡಿದ್ದಾರೆ.
ಹೌದು ಒಂದು ಒಳ್ಳೆಯ ರೆಕಾರ್ಡರ್ ಕೊಂಡುಕೊಂಡು ತಾಳಮದ್ದಳೆ ನಡೆಯುವಾಗ ನೇರವಾಗಿ ಆಂಪ್ಲಿಪ್ಲೆಯರ್ ಗೆ ಕನೆಕ್ಟ್ ಮಾಡಿಕೊಂಡರೆ ಯಾವುದೇ ರೀತಿಯ ಹೊರಗಿನ ಕಿರಿ ಕಿರಿ ಸೌಂಡ್ ಇಲ್ಲದೆ ತಾಳಮದ್ದಳೆ ರೆಕಾರ್ಡ್ ಆಗುತ್ತದೆ.
ಇದರ ಬಗ್ಗೆ ನಿಜವಾಗಿಯೂ ಒಂದು ಧನಾತ್ಮಕವಾದ ಕ್ರಾಂತಿಯಾಗಬೇಕಿದೆ.
ಒಂದಾ "ನಮ್ಮ ಕುಡಲ್ಲ" ಅಥವಾ "ಕ್ಯಾಸೆಟ್ ಕಾರ್ನರ್" ನಂತಹ ಕಂಪೆನಿಗಳೇ ಊರಿನಲ್ಲಿ ನಡೆಯುವ ಸಾಧ್ಯ ಆದಷ್ಟು ಎಲ್ಲಾ ತಾಳಮದ್ದಳೆಗಳ ಕಾಪಿರೈಟ್ ತಗೊಂಡು ಪೂರ್ತಿ ವೀಡಿಯೋ ಅಥವಾ ಆಡಿಯೋ ಮಾಡಿಕೊಂಡು ದಾಖಲೀಕರಣ ಮಾಡಿ ಶೇಖರಿಕರಣ ಮಾಡಿಕೊಂಡು ನೇರವಾಗಿ ಮಾರುಕಟ್ಟೆಗೆ ಬಿಡಲಿ ನಿಜವಾದ ಬೆಲೆಯುಲ್ಲದ್ದಾದ ತಾಳಮದ್ದಳೆಯ ಆಡಿಯೋನಾ ವೀಡಿಯೋನಾ ಯಾವುದೇ ಆದರೂ ಹಣಕೊಟ್ಟು ತಗೊಳ್ಳುವುದಕ್ಕೆ ನನ್ನಂಥವರು ಹಲವರಿದ್ದಾರೆ.
ಅದೂ ಅಲ್ಲದೇ ಇದ್ದರೆ ಪ್ರತಿಯೊಂದು ಸಂಘಟಕರೇ ರೆಕಾರ್ಡ್ ಮಾಡುವ ಕಾಳಜಿವಹಿಸಬೇಕು.
ಆಥವಾ ಈ ದಾಖಲೀಕರಣಕ್ಕಾಗಿಯೇ ಒಂದು ಸ್ವಯಂ ಪ್ರೇರಿತ ಸಂಸ್ಥೆ ಹುಟ್ಟುವುದಾದರೆ ಕಟ್ಟುವುದಕ್ಕೆ ದೂರದೂರಿನಲ್ಲಿ ದುಡಿಯವ ನಾವಿದ್ದೇವೆ. ದುಡಿಮೆಯ ಭಾಗವನ್ನು ಮೀಸಲಿಡುತ್ತೇವೆ.
ಕೊನೇಯ ಪಕ್ಷ ಕಲಾವಿದರಾದರೂ ರೆಕಾರ್ಡರಿನಲ್ಲಿ ರೆಕಾರ್ಡು ಮಾಡಿ ನಮ್ಮಂಥವರ ಹಸಿವಿಗೆ ಆಹಾರ ನೀಡಬಹುದಲ್ಲಾ.
ಯಾರಾದರೂ ಮನಸ್ಸು ಮಾಡಿ ನನ್ನ ಈ ಕೋರಿಕೆಯ ಪತ್ರವನ್ನು ನಮ್ಮ ಕುಡಲ್ಲ" ಮತ್ತು "ಕ್ಯಾಸೆಟ್ ಕಾರ್ನರ್" ನಂತಹ ಕಂಪೆನಿಗಳಿಗೆ ರವಾನಿಸಿ ಅವರಿಂದ ಬಂದ ಉತ್ತರವನ್ನು ನನಗೂ ತಿಳಿಸಿ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
ಫೋಟೋಜರ್ನಲಿಷ್ಟ್
ದಿ ಹಿಂದು ಬೆಂಗಳೂರು
9900500832.
Yakshamitra vedike

Yakshagana program